Wednesday, 2 March 2011

ಪ್ರಿಯ ಗೆಳತಿ


ಮರೆತುಬಿಡು,ನೆನಪೇ ಆಗದ ಹಾಗೆ
ಕೋಲ್ಮಿಂಚು ಕೋರೈಸಿ ಮರೆಯಾಗುವ ಹಾಗೆ...

ರಂಗೋಲಿಯ ಚುಕ್ಕಿ ಕರಗಬಹುದು.ಆಗಸದ ತಾರೆಯಲ್ಲ
ಕಣ್ಣ ನೀರು ಮುಗಿದರೂ ಸಾಗರ ಕರಗುವುದಿಲ್ಲ

ಯಾರು ಬಂದರೂ ಯಾರು ಹೋದರೂ ಹೃದಯ ಖಾಲಿಯಾಗುವುದಿಲ್ಲ
ಅದು ಅಕ್ಷಯಪಾತ್ರೆ;ಎಂದಿಗೂ ಕ್ಷಯಿಸುವುದಿಲ್ಲ.

ಸಿಕ್ಕುದನ್ನು ಬಿಡಬೇಡ,ಸಿಗದುದಕ್ಕೆ ಹುಡುಕಬೇಡ
ನೀನಿಲ್ಲದ ನೋವು ಅವನಿಗಿರಲಿ,ನೀನು ನೋಯಬೇಡ..

ನೆನಪಷ್ಟೇ ಅಲ್ಲ;ಮರೆವೂ ದೇವರೇ ಕೊಟ್ಟ ವರ
ಹೋದರೆ ಹೋಗಲಿ,ಹೋದುದಕ್ಕೆಂದಿಗೂ ಕೊರಗಬೇಡ...

No comments:

Post a Comment