Monday, 7 March 2011

ವಿಷಯ ಚರ್ಚೆಯಾಗಲಿ;ವಿಷ ಬೆರಕೆಯಾಗದಿರಲ (ಕನ್ನಡಪ್ರಭಕ್ಕೆ ಕಳುಹಿಸಿದ್ದ ಅಪ್ರಕಟಿತ ಪ್ರತಿಕ್ರಿಯೆ)


ಇದೊಂದು ಗಮನಾರ್ಹ ವಿಚಾರ. ನಾರಾಯಣಮೂರ್ತಿಯವರ ಆಯ್ಕೆಯ ಬಗ್ಗೆ ಗೊಂದಲ ಹುಟ್ಟಿಸಿರುವುದೇ ಅಸಹ್ಯಕರ....ಕರ್ನಾಟಕವನ್ನು ಬೆಳೆಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಮೂರ್ತಿಯವರ ಕಾಣ್ಕೆ ಅಪಾರ.ಕನ್ನಡ ಕಟ್ಟುವುದೆಂದರೆ ಅದು ಶಬ್ದಗಳಿಂದಷ್ಟೇ ಆಗುವ ಕೆಲಸವಲ್ಲ.ಇದನ್ನು ಅಪಾರ್ಥಕಾರರು ಅರ್ಥ ಮಾಡಿಕೊಳ್ಳಬೇಕು.ಬರಗೂರರು ಇಂತಹ ಬೇಡದ ಸಂಗತಿಗಳನ್ನು ಬೆಳೆಸಿದ್ದು ವಿಹಿತವಲ್ಲ. ಮೂರ್ತಿಯವರಿಂದ ತೆರಿಗೆ ವಂಚನೆಯಾಗಿದ್ದರೆ ಆ ಬಗ್ಗೆ ಸಮಗ್ರ ದಾಖಲೆಗಳನ್ನು ಸಂಗ್ರಹಿಸಿ, ತನಿಖೆಗೆ ಪಟ್ಟುಹಿಡಿಯಲಿ. ಬೇಕೆನಿಸಿದರೆ ಆಮರಣಾಂತ ನಿರಶನವನ್ನೇ ಕೈಗೊಳ್ಳಲಿ.ಇದಕ್ಕೆ ಯಾರ ಅಭ್ಯಂತರವೂ ಇರಲಿಕ್ಕಿಲ್ಲ. ಈ ನಾಡಿನ ಲಕ್ಞೋಪಲಕ್ಷ ಯುವಜನರಿಗೆ ಮಾದರಿಯಾಗಿರುವ,ಹೊಸ ಕನಸು ಕಾಣುವ ಪ್ರೇರಣೆ ಒದಗಿಸಿರುವ ವ್ಯಕ್ತಿಯೊಬ್ಬರ ಬಗ್ಗೆ ಲಘುವಾಗಿ ಮಾತನಾಡುವುದು ಖೇದಕರ.ಕನ್ನಡಪ್ರಭ ಹೆಸರಿಗೆ ಅನ್ವರ್ಥವೆಂಬಂತೆ ಕೈಗೆತ್ತಿಕೊಂಡಿರುವ ಈ ಅಭಿಯಾನ,ನಾಡು-ನುಡಿಗಳ ಬಗ್ಗೆ ಯೋಚಿಸುವ ಮಂದಿಗೊಂದು ಮಾರ್ಗದರ್ಶಿಯಾಗಲಿ.
ಮತ್ತೊಂದು ಮಾತು-
ವಿಶ್ವೇಶ್ವರಭಟ್ಟರ ಕೃಪಾಶೀರ್ವಾದದಿಂದ ಮಾತ್ರವೇ ಅಕ್ಷರ ಬ್ರಹ್ಮರಾಗಿರುವ ಪ್ರತಾಪಸಿಂಹರು,ಬರೆಯುವ ಭರದಲ್ಲಿ ಓದುಗರ ಮೇಲೆ ಅನಗತ್ಯ ಸಂಗತಿಗಳನ್ನು ಹೇರುವ ಯತ್ನ ಮಾಡದಿರಲಿ.
'ಕನ್ನಡನಾಡಿನ ಮೇಲೆ ಪರ್ಷಿಯನ್ ಭಾಷೆಯನ್ನು ಹೇರಿದ ವ್ಯಕ್ತಿಯನ್ನು ಮೈಸೂರಿನ ಹುಲಿ ಎಂದು ಆರಾಧಿಸುವವರ ಕನ್ನಡ ಪ್ರೇಮ ಎಷ್ಟು ಎಂದು ಈ ರಾಜ್ಯದ ಜನರಿಗೆ ಗೊತ್ತು ಬಿಡಿ'ಎಂಬ ಸಾಲುಗಳು ಈ ಲೇಖನಕ್ಕೆ ಹಾಗೂ ಈ ಸಂವಾದಕ್ಕೆ ಸಂಪೂರ್ಣ ಅಪ್ರಸ್ತುತ. ಟೀಪು ಕನ್ನಡ ಪ್ರೇಮಿಯೆ,ವಿರೋಧಿಯೆ ಎಂಬ ಬಗ್ಗೆ ಮಾತಾಡುವುದಕ್ಕೆ ಇದು ಕಾಲವಲ್ಲ.ವಿಷಯಗಳ ಚರ್ಚೆಯ ನಡುವೆ ವಿಷ ಬೆರೆಸುವ ಕೆಲಸ ಮಾಡಬೇಡಿ.
ನಿಮ್ಮ ಪ್ರತಾಪ, ಟೀಪು ಮತ್ತು ಆತನ ಕಾಲಘಟ್ಟದ ನಡಾವಳಿಗಳ ಅಧ್ಯಯನದೊಂದಿಗೆ ಪ್ರಖರಗೊಳ್ಳಲಿ.
ಪ್ರೀತಿಯಿರಲಿ
ಟಿ.ಗುರುರಾಜ್,ಮೈಸೂರು

No comments:

Post a Comment