Monday, 7 March 2011

ಬಿತ್ತುತ್ತಲೇ ಇರಿ ಬೆಳಕಿನ ಬೀಜ…!



ಬೆಳಕಿನ ಬೀಜ ಬಿತ್ತಿದರೆ
ಕೊಳೆ ತೊಳೆದಂತೆ
ಹೊಳೆಯುತ್ತದೆ-ಕತ್ತಲೆ
…………
ರಂಗೋಲಿಯ ಚುಕ್ಕಿಗಳನ್ನು
ಬರಿಗಾಲಿಂದ ಅಳಿಸಿಬಡಬಹುದು
ಆಗಸದ ತಾರೆಗೆ ಕೈ ಹಚ್ಚಬಹುದೆ?
………………….
ಹೊಸ ಚೆಲುವೆ ಬಂದುದಕ್ಕೆ
ತಾರೆಗಳೇ ನಾಚಿ ಮರೆಯಾಗುತ್ತವೆ
ಇನ್ನು ನರಮನುಷ್ಯರದ್ದೇನು ಲೆಖ್ಖ..?
………………
ಕನಸಿನಲ್ಲೂ ಬಾರದಿದ್ದರೆ ಗೆಳತಿ
ಈ ಆಯುಷ್ಯವೆಂಬುದೇಕೆ,
ಗೆರೆ ಕೊರೆದ ನೆನಪಿಗೆ ಸಾವೆಂಬುದೇ ಇಲ್ಲ.
………………
ಚಿಟ್ಟೆ ಮೌನವಾದರೆ
ಹೂವಿಗೂ ಮುನಿಸು
ಸದ್ದಿಲ್ಲದೆ ಪ್ರೀತಿಸು!

No comments:

Post a Comment